• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Authors

Languages

Book Type

Clear All
Filter
ಬೇಸೂರ್ ಇಬುಕ್ | Besur Ebook

ಕವಯತ್ರಿ ವಿದ್ಯಾ ಭರತನಹಳ್ಳಿಯವರು ಕಥಾ ಪ್ರಪಂಚಕ್ಕೆ ಕಾಲಿರಿಸಿದ್ದು ಇತ್ತೀಚೆಗೆ. ನೋಡನೋಡುತ್ತ ಮೂಡಿಬಂದ ಹದಿಮೂರು ಕಥೆಗಳ ಸಂಕಲನ 'ಬೇಸೂರ್'. ರೋಚಕತೆಯ ಮೋಹಕ್ಕೆ ಬೀಳದಿದ್ದರೂ ಶೈಲಿ ಚುರುಕಾಗಿದೆ. ವಸ್ತು ಮತ್ತು ಪಾತ್ರಗಳ ಆಯ್ಕೆ ತುಂಬಾ ಅಥೆಂಟಿಕ್ ಆಗಿದೆ. ಕಥೆಗಾರನಿಗೆ ಅಗತ್ಯವಾದ ನಿರ್ಲಿಪ್ತತೆ ವಿದ್ಯಾರಿಗೆ ಸಿದ್ದಿಸಿದೆ. ಕೆಲವು ಕತೆಗಳಂತೂ ಹೃದಯದಾಳವ ಹೊಕ್ಕು ಬಗೆಯುವಂತಿವೆ. ಗಂಡನೆಂಬ ಪ್ರಾಣಿಯ ಕ್ರೌರ್ಯಕ್ಕೆ ಸಿಕ್ಕು. ಹಿಚುಕಲ್ಪಟ್ಟು ಮಸಣ ಸೇರುವ 'ಆಯಿ'ಯ ಕಮಲಾಕ್ಷಿ, ಅಂಥದೇ ಇನ್ನೊಬ್ಬ ಗಂಡನನ್ನು ಧಿಕ್ಕರಿಸಿ ಹೊರಬಂದು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ 'ಹೇಳೆ ಮೇದಿನಿ'ಯ ಮೇದಿನಿ. ಸ್ತ್ರೀ ಹೃದಯದ ಉದಾತ್ತತೆ ಮೆರೆಯುವ 'ಗಿಂಡಿ ತುಂಬಿದ ಹಾಲಿ'ನ ಶಾಂತಲೆ. ತನ್ನ ಉಕ್ಕುವ ಪ್ರತಿಭೆಯನ್ನು ಸದಾ ಸಿಟ್ಟು, ಸೆಡವು, ಕೊಂಕು ಮಾತುಗಳಿಂದ ಮುರುಟಿಸುವ ಗಂಡನನ್ನು ಕಟ್ಟಿಕೊಂಡು ವಿಲ ವಿಲ ಒದ್ದಾಡುವ ವರ್ಷಾ ದೇಶಪಾಂಡೆ ಮುಂತಾದ ಜೀವಗಳು ಕಥೆ ಓದಿ ಮುಗಿಸಿಯಾದಮೇಲೂ ಬಹುಕಾಲ ನೆನಪಿನಲ್ಲಿ ಸ್ಥಾಯಿಯಾಗುತ್ತವೆ. ಮನ ಕದಡುತ್ತವೆ. ಚಿಂತನೆಗೆ ಹಚ್ಚುತ್ತವೆ. ವಸ್ತುವಿನ ಗಟ್ಟಿತನದಿಂದ, ಶೈಲಿಯ ದಟ್ಟತೆಯಿಂದ, ಜೀವನಾನುಭವದ ಸಮೃದ್ಧತೆಯಿಂದ ವಿದ್ಯಾ ಭರತನಹಳ್ಳಿಯವರ 'ಬೇಸೂರ್' ಕಥಾ ಸಂಕಲನ ಸಾಹಿತ್ಯ ಲೋಕದಲ್ಲಿ ತನ್ನದೇ ಒಂದು ಛಾಪು ಮೂಡಿಸುತ್ತದೆ.

₹125   ₹63

ಬೊಜ್ಜಿಗಿದೆ ಪರಿಹಾರ | Bojjigide parihara

ಡಾ ವೀಣಾ ಎಸ್ ಭಟ್

₹110   ₹98

ಬೊಂಬಾಟ್ ಜೋಕ್ಸ್ | Bombat jokes

ನರಸಿಂಹಮೂರ್ತಿ ಎಂ ಎಸ್

₹270   ₹240

ಬ್ಯಾಂಕಿನಲ್ಲಿ ಖಜಾನೆ ವ್ಯವಸ್ಥಾಪನ ಒಂದು ಕೈಪಿಡಿ | Bankinalli Khajane vyvasthapana ondu kaipidi

ಜೆ.ಎನ್. ಜಗನ್ನಾಥ್ ಅವರ ಖಜಾನೆ ವ್ಯವಸ್ಥಾಪನೆ/ನಿರ್ವಹಣೆ ಕುರಿತಾದ ಈ ಪುಸ್ತಕ ಕನ್ನಡದಲ್ಲಿ ಒಂದು ವಿಶೇಷ ಪ್ರಯತ್ನವಾಗಿದೆ. ಸಾಮಾನ್ಯರಿಗೂ ಅರ್ಥವಾಗುವಂತೆ ವಿದೇಶೀ ವಿನಿಮಯ, ಖಜಾನೆ ನಿರ್ವಹಣೆಯಂತಹ ವಿಷಯಗಳನ್ನು ತಿಳಿಸುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ. ಜೆ.ಎನ್. ಜಗನ್ನಾಥ್ ಅವರು ಎಂಕಾಂ, ಎಂಬಿಎ, ಎಂಎ, ಸಿಎಐಐಬಿ, ಖಜಾನೆ ವ್ಯವಸ್ಥಾಪನದಲ್ಲಿ ಡಿಪ್ಲೋಮೋ, ಮಾನವ ಸಂಪನ್ಮೂಲ ವ್ಯವಸ್ಥಾಪನದಲ್ಲಿ ಡಿಪ್ಲೋಮೋ ಹಾಗೂ ಫ್ಲಾರಿಡಾದ ವಿಶ್ವವಿದ್ಯಾನಿಲಯದಿಂದ ಖಜಾನೆ ವ್ಯವಸ್ಥಾಪನ ವಿಷಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. 25ವರ್ಷಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು, ಆರು ವರ್ಷಗಳ ಕಾಲ ಖಜಾನೆ ವ್ಯವಸ್ಥಾಪನದ ವಹಿವಾಟು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ನಂತರ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ತರಬೇತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು ತಮ್ಮ ಕಂಪನಿಯ ಬ್ಯಾಂಕಿಂಗ್ ತಂತ್ರಾಂಶದ ಕುರಿತು ತರಬೇತಿ ನೀಡಿದ್ದಾರೆ.

₹160   ₹142

ಬ್ರಹ್ಮ | Bramha

nil

₹250   ₹223

ಭಟ್ಟಿ-ವಿಕ್ರಮಾದಿತ್ಯನ ಕಥೆಗಳು | Bhatti - Vikramadityana Kathegalu

ಸಂಸ್ಕೃತ ಕಥಾಸಾಹಿತ್ಯದಲ್ಲಿ ಬೃಹತ್ಕಥಾಮಂಜರಿಗೆ ತನ್ನದೇ ಆದ ಒಂದು ಸ್ಥಾನವಿದೆ. ಭಟ್ಟಿ-ವಿಕ್ರಮಾದಿತ್ಯನ ಕಥೆಗಳು ಆ ಕೃತಿಯಲ್ಲಿ ಬರುವ ಅದ್ಭುತರಮ್ಯ ಕಥಾನಕ. ಮನರಂಜನೆಯನ್ನೇ ಪ್ರಧಾನವಾಗಿ ಉಳ್ಳ ಈ ಕಥೆಗಳಲ್ಲಿ ಮನಸೆಳೆಯುವ ರೋಚಕತೆಯಿದೆ. ಬಹಳ ಹಿಂದೆಯೇ ಭಟ್ಟಿ-ವಿಕ್ರಮಾದಿತ್ಯನ ಕಥೆಗಳು ಚಲನಚಿತ್ರ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ಬಂದು ಬಹುಜನರಿಗೆ ಪ್ರಿಯವಾಗಿವೆ. ಈಗಿನ ಓದುಗರಿಗೂ ಈ ಕಥೆಗಳು ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ

₹295   ₹263

ಭಯ ನಿಮಗೇನು ಮಾಡೀತು | Baya nemagenu madithu

ಗಿರೀಶ್ ವಿ. ವಾಘ

₹40   ₹36

ಭವ | bhava

nil

₹165   ₹147