ತುಮಕೂರು ಜಿಲ್ಲೆಯ ಸಿರಾದಲ್ಲಿ ೧೮.೦೫.೧೯೭೫ ರಂದು ಜನನ. ಪ್ರಾಥಮಿಕ ಶಿಕ್ಷಣ ಸಿರಾ ತಾಲೂಕಿನ ಹೊಸೂರು ಎನ್ನುವ ಗ್ರಾಮದಲ್ಲಿ ಆಗುತ್ತದೆ. ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಪೀಣ್ಯದಲ್ಲಿನ ಸರಕಾರಿ ಶಾಲೆಯಲ್ಲಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಭಾಗದಲ್ಲಿ ಓದಿ ಬೆಂಗಳೂರು ಯೂನಿವರ್ಸಿಟಿಯಿಂದ ಕಾಮರ್ಸ್ ಪದವಿ ಪಡೆಯುತ್ತಾರೆ. ೨೩ ನೆಯ ವಯಸ್ಸಿಗೆ ಕೆಲಸದ ಮೇಲೆ ದೇಶವನ್ನ ತೊರೆದು ದುಬೈ ಸೇರುತ್ತಾರೆ. Read More...
nil
‘ಸಿಲ್ಕ್ ರೂಟ್’ ಪುಸ್ತಕವನ್ನು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯನ್ನು ಮಾಡುತ್ತಿದೆ ಎಂದು ನಿಮಗೆ ತಿಳಿಸಲು ಸಂತಸವಾಗುತ್ತಿದೆ. ಚೀನಾದಿಂದ ಏಷ್ಯಾ ಆಫ್ರಿಕಾ ಹಾಗೂ ಯುರೋಪ್ ಖಂಡದ ವಿವಿಧ ದೇಶಗಳಿಗೆ ಹಾದುಹೋದ ಮಾರ್ಗದ ಬಗ್ಗೆ ರಚಿಸಿರುವ ಈ ಕೃತಿಯ ಬೆನ್ನುಡಿ ಹೀಗಿದೆ: ರೇಷ್ಮೆ ಎಂದರೆ ಮನಸ್ಸಿನಲ್ಲೊಂದು ನವಿರಾದ ಭಾವ ಸರಿದುಹೋಗುತ್ತದೆ. ಒಂದು ಕಾಲದಲ್ಲಿ ಈ ರೇಷ್ಮೆ ಬಂಗಾರ, ಬೆಳ್ಳಿಗಿಂತ ಅಮೂಲ್ಯವಾಗಿತ್ತು. ಇದು ಸಾಗಿದ ರಸ್ತೆಯೇ `ದ ಗ್ರೇಟ್ ಸಿಲ್ಕ್ ರೋಡ್' ಎಂದು ಕರೆಯಲ್ಪಡುವ ರೇಷ್ಮೆ ರಸ್ತೆ. ಜಗತ್ತಿನ ಅನೇಕ ಪ್ರಾಚೀನ ನಾಗರಿಕತೆಗಳನ್ನು ಬೆಸೆದ, ಮೂರು ಖಂಡಗಳಿಗೆ ಸಂಪರ್ಕ ಕಲ್ಪಿಸಿದ ರಸ್ತೆ ಇದು. ಎರಡು ಸಾವಿರ ವರ್ಷಗಳ ಹಿಂದೆ ಈ ರಸ್ತೆಯಲ್ಲಿ ವ್ಯಾಪಾರ ಹೇಗೆ ಸಾಗುತ್ತಿತ್ತು? ಭಾರತೀಯ ವರ್ತಕರು ಈ ರಸ್ತೆಯ ಮೂಲಕ ಹೇಗೆ ವ್ಯಾಪಾರಕ್ಕೆ ಸಾಗಿದರು? ಎಂತೆAಥ ಆಶ್ಚರ್ಯಕರ ಸಂಗತಿಗಳು ಇಡೀ ಜಗತ್ತನ್ನು ವ್ಯಾಪಿಸಲು ಕಾರಣವಾಯಿತು? ಅದರ ಪರಿಣಾಮದಿಂದ ಜಗತ್ತಿನಲ್ಲಿ ಎಂತೆAಥ ಬದಲಾವಣೆಗಳು ಉಂಟಾದವು ಎಂಬ ಸಂಗತಿಗಳನ್ನೆಲ್ಲ ಈ ಕೃತಿ ಆಪ್ತವಾಗಿ ತೆರೆದಿಡುತ್ತದೆ. ಇತಿಹಾಸ-ವರ್ತಮಾನ ಎರಡನ್ನೂ ಹೋಲಿಸಿ ನೋಡುತ್ತ, ಓದುಗರನ್ನು ಹೊಸ ಅರಿವಿನೆಡೆಗೆ ಕರೆದೊಯ್ಯುತ್ತದೆ.” ನನ್ನ ಈ ಪುಸ್ತಕವು ಆಯಾ ದೇಶಗಳ ಚರಿತ್ರೆ, ಭೂಗೋಳ, ಜನಜೀವನ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ವಿಶ್ವಕ್ಕೆ ಸಿಲ್ಕ್ ರಸ್ತೆಯ ಮೂಲಕ ಭಾರತವು ಕೊಟ್ಟ ಕೊಡುಗೆಯೇನೆಂಬುದನ್ನು ಸವಿಸ್ತಾರವಾಗಿ ತಿಳಿಸುವ ಪ್ರಯತ್ನ.
#
ಕಥೆ ಕುರಿತಾಗಿ ಬರೆದ ಓ ಹೆನ್ರಿಯ ಈ ಮಾತು ನನಗೆ ತುಂಬಾ ಇಷ್ಟ "I will give you the whole secret to short story writing. Here it is. Rule 01-right stories that please yourself. There is no rule 02", ಓರ್ವ ಕಥೆಗಾರನಾಗಿ ನಾನು ಮಾಡಿದ್ದಾದರೂ ಏನು? ಇಷ್ಟೇ, ಹೆನ್ರಿ ಹೇಳಿದಷ್ಟೇ.
Showing 4651 to 4680 of 5052 results