nil
ಐತಿಹಾಸಿಕ ಕಥನವನ್ನು ಜನಪದೀಯ ನೆಲೆಯಲ್ಲಿ ವಿಕಸನಗೊಳಿಸುತ್ತ ಕಥನಕಾಲದ ಜೊತೆಗೆ ಆಯಾ ದೇಶಕಾಲದ ಚಿತ್ರಣವನ್ನು ತೆರೆದಿಡುವ ಕಾದಂಬರಿ ಈ ‘ನಿಯುಕ್ತಿಪುರಾಣ’, ಕತೆಯ ಮಟ್ಟಿಗೆ ಅಗಾಧ ಅಳತೆಯ ಕ್ಯಾನ್ವಾಸ್ ಹೊಂದಿರುವ ಇದು ಸುಲಭಕ್ಕೆ ಗ್ರಹಿಸಿ ಹಿಡಿದಿಡಲು ಆಗದಷ್ಟು ದೊಡ್ಡ ಕಥನ. ಲಾವಣಿ, ಜನಪದ ಶಬ್ದ ಭಂಡಾರ, ಕಥನ ಕುತೂಹಲಕ್ಕಾಗಿ ಏರಿಳಿತದ ಅನುಸರಣೆಯ ತಂತ್ರಗಾರಿಕೆ. ಪಾತ್ರಗಳು ಕಟ್ಟಿಕೊಡುವ ಗಟ್ಟಿತನ, ವಿಸ್ತಾರವಾದರೂ ಕೈ ತಪ್ಪದ ಸಂವಹನ ಮತ್ತು ಸಂಪರ್ಕಗಳು, ಸುತ್ತು ಬಳಸಿದರೂ ಮರೆಯದೆ ಜತೆಗೊಯ್ಯುವ ಸಂದರ್ಭದ ಹಲವು ಆವರ್ತಗಳಲ್ಲೂ ಹದತಪ್ಪದ ನಿರೂಪಣೆ ಪುರಾಣದ ವಿಶೇಷತೆಯಾದರೆ, ಹೊಸ ಓದುಗನಿಗೆ ಮತ್ತು ಜನಪದೀಯ ರುಚಿ ಗ್ರಹಿಸಿದವರಿಗೆ, ಗ್ರಂಥಸ್ಥ ಭಾಷೆಯನ್ನಷ್ಟೇ ಓದುವವರಿಗೆ ‘ನಿಯುಕ್ತಿಪುರಾಣ’ ಕೊಂಚ ಒಗರು ಕೂಡ. ಆದರೆ ಪಟ್ಟು ಬಿಡದೆ ಓದಿ ಬಿದ್ದರೆ ಪಳಗಿ ಬಿಡುವ ಬರಹದ ಶೈಲಿಗೆ ಗೊತ್ತಿಲ್ಲದೆ ಆಪ್ತವಾಗಿಸುವ ಹಿಡಿತ ಇಲ್ಲಿದೆ.
Showing 391 to 420 of 747 results