nil
ಜೆ.ಎನ್. ಜಗನ್ನಾಥ್ ಅವರ ಖಜಾನೆ ವ್ಯವಸ್ಥಾಪನೆ/ನಿರ್ವಹಣೆ ಕುರಿತಾದ ಈ ಪುಸ್ತಕ ಕನ್ನಡದಲ್ಲಿ ಒಂದು ವಿಶೇಷ ಪ್ರಯತ್ನವಾಗಿದೆ. ಸಾಮಾನ್ಯರಿಗೂ ಅರ್ಥವಾಗುವಂತೆ ವಿದೇಶೀ ವಿನಿಮಯ, ಖಜಾನೆ ನಿರ್ವಹಣೆಯಂತಹ ವಿಷಯಗಳನ್ನು ತಿಳಿಸುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ. ಜೆ.ಎನ್. ಜಗನ್ನಾಥ್ ಅವರು ಎಂಕಾಂ, ಎಂಬಿಎ, ಎಂಎ, ಸಿಎಐಐಬಿ, ಖಜಾನೆ ವ್ಯವಸ್ಥಾಪನದಲ್ಲಿ ಡಿಪ್ಲೋಮೋ, ಮಾನವ ಸಂಪನ್ಮೂಲ ವ್ಯವಸ್ಥಾಪನದಲ್ಲಿ ಡಿಪ್ಲೋಮೋ ಹಾಗೂ ಫ್ಲಾರಿಡಾದ ವಿಶ್ವವಿದ್ಯಾನಿಲಯದಿಂದ ಖಜಾನೆ ವ್ಯವಸ್ಥಾಪನ ವಿಷಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. 25ವರ್ಷಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು, ಆರು ವರ್ಷಗಳ ಕಾಲ ಖಜಾನೆ ವ್ಯವಸ್ಥಾಪನದ ವಹಿವಾಟು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ನಂತರ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ತರಬೇತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು ತಮ್ಮ ಕಂಪನಿಯ ಬ್ಯಾಂಕಿಂಗ್ ತಂತ್ರಾಂಶದ ಕುರಿತು ತರಬೇತಿ ನೀಡಿದ್ದಾರೆ.
NA
#
ಸಂಸ್ಕೃತ ಕಥಾಸಾಹಿತ್ಯದಲ್ಲಿ ಬೃಹತ್ಕಥಾಮಂಜರಿಗೆ ತನ್ನದೇ ಆದ ಒಂದು ಸ್ಥಾನವಿದೆ. ಭಟ್ಟಿ-ವಿಕ್ರಮಾದಿತ್ಯನ ಕಥೆಗಳು ಆ ಕೃತಿಯಲ್ಲಿ ಬರುವ ಅದ್ಭುತರಮ್ಯ ಕಥಾನಕ. ಮನರಂಜನೆಯನ್ನೇ ಪ್ರಧಾನವಾಗಿ ಉಳ್ಳ ಈ ಕಥೆಗಳಲ್ಲಿ ಮನಸೆಳೆಯುವ ರೋಚಕತೆಯಿದೆ. ಬಹಳ ಹಿಂದೆಯೇ ಭಟ್ಟಿ-ವಿಕ್ರಮಾದಿತ್ಯನ ಕಥೆಗಳು ಚಲನಚಿತ್ರ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ಬಂದು ಬಹುಜನರಿಗೆ ಪ್ರಿಯವಾಗಿವೆ. ಈಗಿನ ಓದುಗರಿಗೂ ಈ ಕಥೆಗಳು ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ
ಗಿರೀಶ್ ವಿ. ವಾಘ
Showing 3241 to 3270 of 5182 results