nil
"ಬಾಸ್, ಆ ಮುಗ್ಧ ಹುಡುಗಿ ಇಂಪನಾ ಇದ್ದಾಳಲ್ಲಾ ನೋಡೋದಿಕ್ಕೂ ಚೆಲುವೆ. ನಮ್ಮ ಈ ಯೋಜನೆಗೆ ಅವಳೇ ಸರಿಯಾದ ಆಯ್ಕೆ" “ಸರಿ, ಹಾಗಾದ್ರೆ ಇವತ್ತು ಸಂಜೆ ಅವಳನ್ನು ಭೇಟಿಯಾಗು" ಅವನು ಒಪ್ಪಿಯಿಗೆಯಿತ್ತ ಇಂಪನಾ ಕೆಲಸಕ್ಕೆ ಹೊರಡುವ ಆತುರದಲ್ಲಿ ಬೆಳಿಗ್ಗೆ ಒಬ್ಬಳೇ ನಿರ್ಜನ ರಸ್ತೆಯಲ್ಲಿ ಬರುತ್ತಿರುವಾಗ ಗಕ್ಕನೆ ಕಾರೊಂದು ಬಂದು ಅವಳ ಹತ್ತಿರವೇ ನಿಂತಿತು. "ಮೇಡಂ, ಬನ್ನಿ ನಿಮಗೆ ಇನ್ನು ಬಸ್ಸು ಸಿಗೊಲ್ಲ. ನಾನೇ ನಿಮ್ಮನ್ನು ಡ್ರಾಪ್ ಮಾಡ್ತೀನಿ" ಪರಿಚಿತ ಧ್ವನಿ ಕೇಳಿದಂತಾಯಿತು. ಅವಳು ಹಿಂದೆ ಮುಂದೆ ಆಲೋಚಿಸದೆ ತೆರೆದ ಕಾರಿನ ಬಾಗಿಲೊಳಗೆ ತೂರಿಕೊಂಡಳು. ಬಾಗಿಲು ಕಾರು ರೊಯ್ಯನೆ ಮುಂದಕ್ಕೋಡಿತು... ಅವನು ಪಕ್ಕದಲ್ಲಿ ಕುಳಿತವಳತ್ತ ವಿಚಿತ್ರ ನೋಟ ಹರಿಸಿದ ಮುಂದೆ...? ನೀವೇ ಓದಿ ನೋಡಿ... 'ತೂಗುದೀಪ' ವಿಭಿನ್ನ ಕಥಾಹಂದರದ ಕುತೂಹಲಭರಿತ ಪತ್ತೇದಾರಿ ಕಿರು ಕಾದಂಬರಿ.
ಡಿಯರ್ ಡಿಟೆಕ್ಟಿವ್ ಹಿಮವಂತ್, ನಾನು ಈ ಡೆತ್ ನೋಟನ್ನು ನಿನಗೆ ಕಳಿಸುತ್ತಿರುವ ಹಿಂದೆ ಒಂದು ಪ್ರಮುಖ ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಬದುಕು ದುಸ್ತರವಾದಂತೆ ನನಗನಿಸುತ್ತಿದೆ. ಜೊತೆಗೆ ನನ್ನ ವೈಯಕ್ತಿಕ ಜೀವನವು ತೀರ ಹದಗೆಟ್ಟು ಹೋಗಿರುವುದರಿಂದ ನನಗೆ ಬದುಕುವ ಆಸಕ್ತಿಯು ಹೊರಟುಹೋಗಿದೆ. ಒಂದಿಷ್ಟು ತಿಂಗಳಿನಿಂದ ಸೀವಿಯರ್ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಹಾಗೇಯೇ ಮೂರ್ನಾಲ್ಕು ತಿಂಗಳಿಂದ ಒಂದಕ್ಷರವನ್ನು ಬರೆಯಲಾಗುತ್ತಿಲ್ಲ ಎಂಬ ಕೊರಗು ನನ್ನನ್ನು ಸದಾ ಕಾಡುತ್ತಿದೆ. “ಫಿಲ್ಲರ್ ಕಾದಂಬರಿಗಾರ್ತಿ ಯಾಗಿ ಸಿಕ್ಕ ಖ್ಯಾತಿಯೆಲ್ಲವೂ ಶೂನ್ಯವೆಂದು ನನಗೀಗ ಅರಿವಾಗುತ್ತಿದೆ. ಒಂದು ವೇಳೆ ನಾನು ಸತ್ತು ಹೋದರೆ, ಅದಕ್ಕೆ ನನ್ನ ಗಂಡ ಮತ್ತು ಅವನೊಟ್ಟಿಗೆ ಅಕ್ರಮ ಸಂಬಂಧವನ್ನು ಹೊಂದಿರುವ “ಚರ್ಚ್ ಸ್ಪೀಟ್ ನ ಹುಡುಗಿಯು ಕಾರಣವಾಗಿರುತ್ತಾರೆ. ಇದಲ್ಲದೆ ಸಾಯುವ ಮುನ್ನ ಸಾಕಷ್ಟು ರಹಸ್ಯಗಳನ್ನು ನಿನ್ನೊಂದಿಗೆ ತೆರದಿಡಬೇಕಿದೆ. ಆದ್ದರಿಂದ ಮಧ್ಯರಾತ್ರಿ ಒಂದರ ವೇಳೆಗೆ ನೀನು ನನ್ನನ್ನು ಭೇಟಿಯಾಗಬೇಕು. ಭೇಟಿಯು ರಹಸ್ಯವಾಗಿರುವುದರಿಂದ ಸ್ಥಳವನ್ನು ಕೂಡ ರಹಸ್ಯವಾಗಿರಿಸಿದ್ದೇನೆ. ನೆನಪಿರಲಿ, ಇದೊಂದು ಸೀಕ್ರೆಟ್ ಡೆತ್ ನೋಟ್ !! ನೋವಿನಿಂದ ತಾರಾಗುಪ್ತ…
Showing 271 to 300 of 640 results