• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಅಚ್ಚರಿ | Achhari

#

₹250   ₹223

ಇಕಿಗಾಯ್ ಪಯಣ | Ikigay Payana

‘ಇಕಿಗಾಯ್ ಪಯಣ’ ಎಂಬ ಈ ಕೃತಿಯಲ್ಲಿ, ಹೆಕ್ಟರ್ ಗಾರ್ಸಿಯ ಮತ್ತು ಫ್ರಾನ್ಸಿಸ್ಕ್ ಮಿರೆಯೆಸ್ ಎಂಬ ಈ ಇಬ್ಬರೂ ಲೇಖಕರು ‘ಇಕಿಗಾಯ್: ದೀರ್ಘ ಮತ್ತು ಸಂತಸಕರ ಜೀವನಕ್ಕೆ ಜಪಾನಿಯರ ಗುಟ್ಟು’ ಎಂಬ ಅಂತರಾಷ್ಟಿçÃಯ ಮಟ್ಟದಲ್ಲಿ ಉತ್ತಮವಾಗಿ ಮಾರಾಟಗೊಂಡ ತಮ್ಮ ಈ ಹಿಂದಿನ ಕೃತಿಯನ್ನು ಮತ್ತೊಂದು ಹೆಜ್ಜೆ ಮುಂದೆ ಒಯ್ದಿದ್ದಾರೆ. ಅದು ಹೇಗೆಂದರೆ ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ನಿಮ್ಮ ಹಿತವಲಯದಿಂದಾಚೆಗೆ ಹೆಜ್ಚೆ ಇರಿಸುವುದು, ಇಂತಹ ಪ್ರಾಯೋಗಿಕ ಕಸರತ್ತುಗಳ ಮುಖಾಂತರ ನಿಮ್ಮದೇ ಇಕಿಗಾಯ್‌ನ್ನು ಕಂಡುಕೊಳ್ಳುವುದು. ಇಕಿಗಾಯ್ ಎಂಬುದು, ನಮ್ಮ ಗಾಢ ಅನುರಕ್ತಿ, ಹಂಬಲ (ನಾವೇನನ್ನು ಪ್ರೀತಿಸುತ್ತೇವೊ ಅದು), ನಮ್ಮ ಉದ್ದಿಷ್ಟ ಕಾರ್ಯ (ಏನನ್ನು ನಾವು ಕೊಡುಗೆಯಾಗಿ ನೀಡಲು ಆಶಿಸುತ್ತೇವೊ ಅದು), ನಮ್ಮ ಪ್ರವೃತ್ತಿ (ಜಗತ್ತಿಗೆ ನಾವು ಅರ್ಪಿಸಬೇಕಿರುವ ಉಡುಗೊರೆ) ಹಾಗೂ ನಮ್ಮ ಉದ್ಯೋಗ(ನಮ್ಮ ಗಾಢ ಅನುರಕ್ತಿಗಳು ಮತ್ತು ಪ್ರತಿಭೆಗಳು ಜೀವನೋಪಾಯಕ್ಕೊಂದು ದಾರಿಯಾಗಬಲ್ಲವು) ಇವೆಲ್ಲವೂ ಸಂಧಿಸಿ ನಮಗೊಂದು ವೈಯಕ್ತಿಕ ಅರ್ಥ ನೀಡುವ ಜಾಗ. ನೀವು ಒಂದು ಸಮತೋಲನದ ಜೀವನವನ್ನನುಭವಿಸಲು ಶಕ್ಯವಾಗುವಂತೆ ಈ ಎಲ್ಲಾ ಮೂಲಧಾತುಗಳನ್ನು ಒಗ್ಗೂಡಿಸುವಲ್ಲಿ ಈ ಪುಸ್ತಕ ನಿಮಗೆ ಸಹಾಯ ಮಾಡುತ್ತದೆ. ನಮ್ಮ ಇಕಿಗಾಯ್ ಎಂಬುದು ಬದಲಾವಣೆಗೆ ತೀರ ಸಾಮ್ಯವಾದುದ್ದು: ಅದು ನಾವು ಬದುಕಿನ ಯಾವ ಹಂತದಲ್ಲಿದ್ದೇವೆAಬುದರ ಮೇಲೆ ಅವಲಂಬಿಸಿ ಪರಿವರ್ತಿತವಾಗುವ ಒಂದು ನಿಯತಾಂಕ. ನಾವು ‘ಅಸ್ತಿತ್ವದಲ್ಲಿರುವುದರ ಕಾರಣ/ಹೇತು’ ಅಂದರೆ ನಮ್ಮ ಇಕಿಗಾಯ್ ಎಂಬುದೇನಿದೆಯೋ ಅದು ನಮಗೆ ೧೫ ವರ್ಷವಾಗಿದ್ದಾಗ ಇದ್ದುದ್ದರ ಮಟ್ಟದಲ್ಲೇ ನಮಗೆ ಎಪ್ಪತ್ತು ವರ್ಷವಾದಾಗಲೂ ಇರುವುದಿಲ್ಲ. ಮೂರು ವಿಭಾಗಗಳ ಮುಖಾಂತರ, ಈ ಪುಸ್ತಕವು ಅದನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುತ್ತದೆ- ನೀವು ನಿಮ್ಮ ವರ್ತಮಾನ ಕಾಲವನ್ನು ಸುಖವಾಗಿ ಅನುಭವಿಸುವ ಸಲುವಾಗಿ, ನಿಮ್ಮ ಭೂತಕಾಲವನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತಾ, ನಿಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸುವಲ್ಲಿ ಒಂದು ಸಾಧನವಾಗಿ ಕೆಲಸಗೈವುದು.

₹245   ₹218

ಇಚಿಗೊ ಇಚಿಯೆ | Ichigo Ichie

ಬದುಕಿನ ಪ್ರತಿ ಕ್ಷಣವನ್ನೂ, ಅದು ಒಂದೇ ಬಾರಿಗೆ ನಮಗೆ ಸಿಗುವುದು ಎಂಬಂತೆ ಅನುಭವಿಸಬೇಕಾದರೆ ಈ ಕೃತಿ ನಿಮಗೆ ಒಳ್ಳೆಯ ಮಾರ್ಗದರ್ಶಿಯಾದೀತು. ಈ ‘ಇಚಿಗೊ ಇಚಿಯೆ’ ಎಂಬ ಜಪಾನಿ ಕಲೆಯ ಬಗ್ಗೆ, ಅತ್ಯಧಿಕ ಮಾರಾಟವಾಗುವ ‘ಇಕಿಗಾಯ್ʼನ ಲೇಖಕರೇ ಬರೆದಿರುವ ಪುಸ್ತಕ ಇದಾಗಿದೆ. “ತಮಗೆ ಖುಷಿ ಕೊಡುವ ಸಂಗತಿಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಸರಳಗೊಳಿಸಬೇಕು ಎಂದು ಇಕಿಗಾಯ್ ಪ್ರತಿಯೊಬ್ಬರನ್ನೂ ಆಗ್ರಹಿಸುತ್ತದೆ” (ಮೇರಿ ಕೊಂಡೊ). ನಮ್ಮ ಜೀವನದಲ್ಲಿ ಪ್ರತಿ ಕ್ಷಣವೂ ಒಂದೇ ಬಾರಿಗೆ ಸಂಭವಿಸುತ್ತದೆ ಮತ್ತು ಅದನ್ನು ನಾವು ಕೈಚೆಲ್ಲಿದರೆ ಅದನ್ನು ಶಾಶ್ವತವಾಗಿ ಕಳೆದುಕೊಂಡಂತೆ- ಜಪಾನಿನ ನಾಣ್ಣುಡಿ ‘ಇಚಿಗೊ ಇಚಿಯೆ’ಯಿಂದ ಆಯ್ದುಕೊಂಡಿರುವ ಒಂದು ಉಪಾಯ. ಇದು, ಝೆನ್ ಬೌದ್ಧ ಧರ್ಮದ ತತ್ವವಾಗಿದೆ. ಇದನ್ನು ಹದಿನಾರನೇ ಶತಮಾನದ ಓರ್ವ ಟೀ ಮಾಸ್ಟರ್‌ಗೆ ಸಮರ್ಪಿಸಲಾಗಿದ್ದು, ಅವರ ಚಹಾ ಕೂಟಗಳ ಆಚರಣೆಗಳಲ್ಲಿ, ವರ್ತಮಾನ ಕ್ಷಣದ ಮೇಲೆ ಹೇಗೆ ಗಮನ ಕೇಂದ್ರೀಕರಿಸಬೇಕು ಎಂಬುದನ್ನು ತೋರಿಸಿಕೊಡಲಾಗಿದೆ. ಇದನ್ನು ‘ಗಮನದ ಕೂಟ’ ಎಂದೂ ಕರೆಯಲಾಗುತ್ತದೆ. ಹಳೆಯ ಕಾಲದ ಈ ಆಚರಣೆಯಿಂದ, ನಮ್ಮಲ್ಲಿ ಸಾವಧಾನತೆ ಮೈದುಂಬಿಕೊಳ್ಳುತ್ತದೆ. ಇಚಿಗೊ ಇಚಿಯೆ ಎಂಬ ಈ ಪುಸ್ತಕದ ಮೂಲಕ, ಪ್ರಸ್ತುತ ಕ್ಷಣದಲ್ಲಿರಲು ಪಂಚೇಂದ್ರಿಯಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನೀವು ಕಲಿಯುತ್ತೀರಿ. ನಾವು ಪ್ರತಿಯೊಬ್ಬರೂ, ಗಮನ ಎಂಬ ಬಾಗಿಲನ್ನು ತೆರೆಯುವ, ಇತರರೊಂದಿಗೆ ಸೌಹಾರ್ದದಿಂದಿರುವ ಮತ್ತು ಜೀವನದೆಡೆಗಿನ ಪ್ರೀತಿಯ ಕೀಲಿಕೈಯನ್ನು ಹೊಂದಿರುತ್ತೇವೆ. ಆ ಕೀಲಿಕೈಯೇ ಇಚಿಗೊ ಇಚಿಯೆ. “ನಮ್ಮ ಚೈತನ್ಯವನ್ನು ಬಡಿದೆಬ್ಬಿಸಿ, ‘ಈ ಕ್ಷಣ’ದಲ್ಲಿ ಬದುಕುವುದರ ಮಹತ್ವವನ್ನು ನಮಗೆ ನೆನಪಿಸಲು ಹಾಗೂ ಭೂತಕಾಲ ಇಲ್ಲವೇ ಭವಿಷ್ಯದ ಬಗ್ಗೆ ಚಿಂತಿಸದೇ ಬದುಕುವುದನ್ನು ನೆನಪಿಸಲು ಈ ಸಣ್ಣ ಪುಸ್ತಕ ಸಾಕು”- ೫* ಓದುಗರ ವಿಮರ್ಶೆ “ಈ ಪುಸ್ತಕವು ನಮಗೆ ಅಲಾರ್ಮ್ ನಂತೆ ಕೆಲಸ ಮಾಡಬೇಕು. ಪ್ರತಿಯೊಂದು ‘ಕ್ಷಣ’ವನ್ನೂ ಪವಿತ್ರಗೊಳಿಸಲು ಗಮನ ಕೊಡಿ! ಪ್ರತಿ ಕ್ಷಣವನ್ನೂ ವಿಶೇಷವಾಗಿಸಿ!!”- ೫* ಓದುಗರ ವಿಮರ್ಶೆ “ಇಕಿಗಾಯ್ ಲೇಖಕರು ಸರಳವಾದ ಮತ್ತು ಹೆಚ್ಚು ಪರಿಪೂರ್ಣವಾದ ಬದುಕು ಬಾಳಲು ಇಚ್ಛಿಸುವವರಿಗೆ ಮತ್ತೊಂದು ಸಂಕ್ಷಿಪ್ತವಾದ ಮತ್ತು ಪಾಂಡಿತ್ಯಪೂರ್ಣ ಸೇರ್ಪಡೆಯನ್ನು ಮಾಡಿದ್ದಾರೆ”- ೫* ಓದುಗರ ವಿಮರ್ಶೆ

₹150   ₹134

ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್ ಮಂತ್ರಗಳು | Ottada Mukta Jeevanakke 101 Magic Mantragalu

ಎಲ್ಲರೂ ಇಂದು ಸಾವಧಾನತೆಯ ಹಾಗೂ ನಮ್ಮ ಮೇಲೆ ನಾವು ಹೂಡಿಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ. `ಒತ್ತಡ ಮುಕ್ತ ಜೀವನಕ್ಕೆ 101 ಮ್ಯಾಜಿಕ್‌ ಮಂತ್ರಗಳು ಇಲ್ಲಿನ ಪ್ರತಿ ಮ್ಯಾಜಿಕ್‌ ಮಂತ್ರಗಳು ಮನಸ್ಸನ್ನು ಹೇಗೆ ಉಪಯೋಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳುವುದು ಎಂಬ ತುಡಿತದ ರೂಪಕಗಳೇ ಆಗಿವೆ. ಪುಸ್ತಕದ ಪ್ರತೀ ಲೇಖನಗಳು ಮಾನಸಿಕ ಸ್ವಯಂ-ಆರೈಕೆ ಜೊತೆಗೆ ದೇಹ ಹಾಗೂ ಮನಸ್ಸನ್ನು ಉತ್ತೇಜಿಸುವ ಸೃಜನಾತ್ಮಕ ಜೀವನ ಶೈಲಿಯ ರಚನೆಯ ಕುರಿತಾಗಿ ಮಾತನಾಡುತ್ತಾ ಹೋಗುತ್ತವೆ. ಸಂವೇದನೆಗಳನ್ನು, ಆಲೋಚನೆಗಳನ್ನು ಈ ಕ್ಷಣದ ತುರ್ತಿಗೆ ಅಂಗೀಕರಿಸುತ್ತ, ಶಾಂತಗೊಳಿಸುತ್ತಾ, ನಿಭಾಯಿಸುತ್ತಾ ಆ ಮೂಲಕ ಬದುಕಿನ ದೀರ್ಘಕಾಲಿಕ ಮಾನಸಿಕ ಸುಸ್ಥಿರತೆಯಾಗಿ ಬದಲಾಯಿಸುವ ಮಾಂತ್ರಿಕ ಮಿಡಿತಗಳನ್ನು ಇಲ್ಲಿನ ಪ್ರತಿ ಅಕ್ಷರಗಳಲ್ಲೂ ಕಾಣಬಹುದಾಗಿದೆ. ಇಲ್ಲಿರುವ 101 ಮ್ಯಾಜಿಕ್‌ ಮಂತ್ರಗಳು ಪ್ರತಿಧ್ವನಿಸುವುದು `ನಿಮ್ಮ ಮನಸ್ಸಿನ ನಾಯಕ/ನಾಯಕಿ ನೀವೇ ಎಂಬ ಘೋಷಣೆಯೊಂದನ್ನೇ.' ದೇಹ-ಮನಸ್ಸು-ಮೆದುಳಿನ ಸೂಕ್ಷ್ಮಗಳನ್ನು ಅರಿಯುವ ಅಗತ್ಯವಾದ ಹೊಳಹುಗಳು ಇಲ್ಲಿನ ಪ್ರತಿ ಲೇಖನಗಳಲ್ಲೂ ಕೂಡಿವೆ. ಪುಸ್ತಕ ನಿಮ್ಮಲ್ಲೂ ಮ್ಯಾಜಿಕ್‌ ಮೂಡಿಸುತ್ತದೆ ಎಂಬ ನಂಬಿಕೆಯೊಂದಿಗೆ...

₹150   ₹134