• Welcome to Our store    Veeraloka Books
  • Call Us : +91 7022122121 / +91 8861212172

ಕಥಾಸ್ಪರ್ಧೆಯ ನಿಯಮಗಳು

  • Date : 17-09-2024
  • Time : 11.30 AM
  • Duration : 1.30 mins
  • Location : Banlogare

ಇದೊಂದು ಅತ್ಯಪೂರ್ವ ಅವಕಾಶ: “ಬಾ ಇಲ್ಲಿ ಸಂಭವಿಸು, ಇಂಥ ವಿಶಿಷ್ಟ ಕಥಾಸ್ಪರ್ಧೆ ನಮ್ಮ ದೇಶ-ಭಾಷೆ-ಕಾಲದಲ್ಲಿ ಈಗ ಘಟಿಸುತ್ತಿರುವ ಅಪೂರ್ವ !!

ನೀವು ಮಾಡಬೇಕಿರುವುದು ಇಷ್ಟೇ:
ಕನ್ನಡದ ಓದುಗರ ಸಂವೇದನೆ, ಸೂಕ್ಷ್ಮತೆಗಳನ್ನು ಮುಟ್ಟಿತಟ್ಟಿ, ಜಾಗರೂಕಗೊಳಿಸಬಲ್ಲ ಹೊಚ್ಚ ಹೊಸ ಕಥೆಯನ್ನು ಬರೆಯುವುದು. ಹೊಸ ಕಥನಗಳ ದಾರಿಗೆ ಬೇಕಾದ ಹೊಸ ಕಸುವು, ತಾರುಣ್ಯದ ಹುಮ್ಮಸ್ಸನ್ನು ತುಂಬುವುದು.ಕನ್ನಡ ಕಥಾಲೋಕಕ್ಕೆ ಇದು ‘ನುಡಿಯ ಭಾಗ್ಯ’ ಎನ್ನುವಂಥ ಮಹತ್ವಾಕಾಂಕ್ಷೆಯ ಕಥೆಯನ್ನು ಕಟ್ಟುವುದು.

ಕಥಾಸ್ಪರ್ಧೆಯ ನಿಯಮಗಳು

  • ಕನ್ನಡದಲ್ಲಿ ಬರೆಯುವ ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ.
  • ಕಥೆ ಅಚ್ಚ ಕನ್ನಡದ್ದಾಗಿರಬೇಕು. ಸ್ವಂತಿಕೆ ಮುಖ್ಯ. ಯಾವುದೇ ಭಾಷೆಯ ನಕಲು, ರೂಪಾಂತರ, ಪ್ರೇರಣೆ, ಛಾಯೆ-ನೆರಳು ಇತ್ಯಾದಿಗಳಿಗೆ ಅವಕಾಶವಿಲ್ಲ. ಒಂದೊಮ್ಮೆ, ಅಂತಹ ಸುಳಿವು ಸಿಕ್ಕರೆ ಅಂತಹ ಕಥೆಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು.
  • ಚಿಂತೆ ಬೇಡ, ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಆದರೆ, ಪದಗಳ ಮಿತಿಯಿದೆ. ನಿಮ್ಮ ಕೊನೆಯ ಅಕ್ಷರಕ್ಕೆ ಪೂರ್ಣವಿರಾಮ ಹಾಕಿದಾಗ ಕಥೆಗೆ ಮೂರು ಸಾವಿರ ಪದಗಳಿರಬೇಕು. ಅತಿ ಅಪರೂಪದ ಸನ್ನಿವೇಶದಲ್ಲಿ ಈ ನಿಯಮವನ್ನು ಸಡಿಲಿಸಲೂಬಹುದು.
  • ಒಬ್ಬರು ಒಂದು ಕಥೆಯನ್ನು ಮಾತ್ರ ಕಳಿಸಬಹುದು. ಬೇರೊಂದು ಹೆಸರಿನಲ್ಲಿ ಕಳಿಸಿ, ಅಂತಹ ಕಥೆಗೆ ಪುರಸ್ಕಾರ ದೊರೆತು ಮೂಲ ಹೆಸರು ತಿಳಿದಾಗ ಪುರಸ್ಕಾರ ತಡೆಹಿಡಿಯಲಾಗುವುದು.
  • ಮೊದಲ ಬಹುಮಾನಕ್ಕೆ ಅರ್ಹ ಕಥೆಗಳಿಲ್ಲವೆಂದು ತೀರ್ಪುಗಾರರು ನಿರ್ಣಯಿಸಿದರೆ ಬಹುಮಾನವನ್ನು ಹಂಚಿಕೆ ಮಾಡಲಾಗುವುದು.
  • ಇನ್ನೊಂದು ಮುಖ್ಯ ನಿಯಮ: ಈ ಸ್ಪರ್ಧೆಯಲ್ಲಿ ಭಾಗವಹಿಸುವವರು, ಭಾಗವಹಿಸುವ ದಿನಾಂಕದವರೆಗೆ ತಮ್ಮ ಯಾವುದೇ ‘ಕಥಾ ಸಂಕಲನ’ವನ್ನು ಪ್ರಕಟಿಸಿರಬಾರದು. ಒಂದಾದರೂ ಕಥಾ ಸಂಕಲನವನ್ನು ಈವರೆಗೆ ಪ್ರಕಟಿಸಿರುವವರು ಸ್ವಲ್ಪ ಮಟ್ಟಿಗಿನ ಮಾನ್ಯತೆಯನ್ನು ಪಡೆದು ಇಂಥ ಸ್ಪರ್ಧೆಗಳಲ್ಲಿ ಈಗಾಗಲೇ ಪಾಲ್ಗೊಂಡಿರುತ್ತಾರೆ ಎಂಬುದು ಈ ನಿಯಮಕ್ಕೆ ಕಾರಣ. ಜತೆಗೆ, ಹೊಸ ತಲೆಮಾರಿನ ತರುಣ-ತರುಣಿಯರು ಹುಮ್ಮಸ್ಸಿನಿಂದ ಭಾಗವಹಿಸಲು ಅನುವು ಮಾಡಿಕೊಡುವುದು ಈ ನಿಯಮದ ಇನ್ನೊಂದು ಉದ್ದೇಶ.
  • ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ನೀವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ಧರೆ, ಈವರೆಗೆ, ಅಂದರೆ 2023ರ ವರೆಗೆ, ನಿಮ್ಮ ಒಂದೂ ‘ಕಥಾ ಸಂಕಲನ’ ಪ್ರಕಟವಾಗಿರಬಾರದು. ಬೇರೆ ಪ್ರಕಾರದಲ್ಲಿ ನಿಮ್ಮ ಪುಸ್ತಕ ಪ್ರಕಟವಾಗಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ.

\