• Welcome to Our store    Veeraloka Books
  • Call Us : +91 7022122121 / +91 8861212172

ಗುರುವಂದನೆ

  • 07 September 2024

ಗುರು ಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ .ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇನಮಃಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿವರ್ಣ ಮಾತ್ರಃ ಕಲಿಸಿದಾತಃ ಗುರುಗು ಗುರುತರವಾದ ಜವಾಬ್ದಾರಿಯರು -ರುವಾರಿಯೇ -ಗುರುಹರ ಮುನಿದರೆ ಗುರು ಕಾಯ್ವನುಗುರು ಮುನಿದರೆ ಕಾಯ್ವರಿಲ್ಲಾ

ಗುರು ಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ .ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇನಮಃಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿವರ್ಣ ಮಾತ್ರಃ ಕಲಿಸಿದಾತಃ ಗುರುಗು   ಗುರುತರವಾದ ಜವಾಬ್ದಾರಿಯರು -ರುವಾರಿಯೇ -ಗುರುಹರ ಮುನಿದರೆ ಗುರು ಕಾಯ್ವನುಗುರು ಮುನಿದರೆ ಕಾಯ್ವರಿಲ್ಲಾ

ಎಂಬೆಲ್ಲಾ ನುಡಿಗಳು ಗುರುವಿನ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುತ್ತವೆ . ಗುರು ಎಂದರೆ ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದವನ ಕಣ್ಣನ್ನು ಜ್ಞಾನವೆಂಬ ಅಂಜನ ಲೇಪಿಸಿ ಸತ್ಕಾರ್ಯವೆಂಬ ಮಾರ್ಗದಲ್ಲಿ ನಡೆಯಲು ದಾರಿತೋರುವವನೇ ಆಗಿದ್ದಾನೆ .ನಾವು ಯಾವುದೇ ಸಾಧನೆ ಮಾಡಲು ಮುಂದೆ ಗುರು ಹಿಂದೆ ಗುರಿ ಇರಬೇಕಂತೆ  .ನಮ್ಮ ಪ್ರತಿ ಯಶಸ್ಸಿನ ಹಿಂದೆ ಗುರುಗಳ ಆಶೀರ್ವಾದ ಮಾರ್ಗದರ್ಶನವಿದ್ದೇ ಇರುತ್ತದೆ.ಇಲ್ಲಿ ಗುರು ಎಂದರೆ ಕೇವಲ ಶಾಲೆಯಲ್ಲಿ ಕಲಿಸುವಾತ ಮಾತ್ರವಲ್ಲಾ,ನಮ್ಮ ಬದುಕಿನ ಪ್ರತಿ ಹಂತದಲ್ಲೂ, ಪ್ರಭಾವ ಬೀರುವ ವ್ಯಕ್ತಿಗಳು ಕೂಡ ಗುರುಗಳೇ ಆಗಿದ್ದಾರೆ .ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ ,ಅಣ್ಣ, ಅಜ್ಜ, ಅಜ್ಜಿ, ಬಂಧು- ಬಾಂಧವರು, ಸ್ನೇಹಿತರು, ನಮ್ಮಸುತ್ತಮುತ್ತಲಿನ ಜನರು ಕೂಡ ನಮಗೆ ಒಂದಲ್ಲಾ ಒಂದು ರೀತಿಯ ಮಾರ್ಗದರ್ಶನ ನೀಡಿಯೇ ಇರುತ್ತಾರೆ .ಅವರು ಸಹ ನಮಗೆ ಗುರುಗಳೇ ಆಗಿದ್ದಾರೆ.

ಜೊತೆಗೆ ಶಾಲೆಯಲ್ಲಿ ವಿದ್ಯಾರ್ಥಿ ಜೀವನದ ಉದ್ದೇಶಗಳನ್ನು, ಕನಸುಗಳನ್ನು, ಹುಟ್ಟಿ ಹಾಕುವವನು ಗುರುವಾಗಿದ್ದಾನೆ. ಆ ಗುರಿ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ದಾರಿ ತೋರುವವನಾಗಿದ್ದಾನೆ. ಸರಿ ತಪ್ಪುಗಳ ಅರಿವು ಮೂಡಿಸುವವನು, ಉತ್ತಮ ನಡೆ ನುಡಿ, ವೈಚಾರಿಕತೆ, ಕುತೂಹಲ, ಆಸಕ್ತಿ ,ಸ್ವ ವಿಮರ್ಶೆ, ಪರೋಪಕಾರ, ಸಹಕಾರ, ಸಾಮರಸ್ಯದ ಮನೋಭಾವಗಳನ್ನು ತನ್ನ ಶಿಷ್ಯ ಸಮುದಾಯದಲ್ಲಿ ರೂಪಿಸಿ, ತನಗಿಂತ ಎತ್ತರದ ಸ್ಥಾನದಲ್ಲಿ ನೋಡ ಬಯಸುವ ಒಬ್ಬನೇ ವ್ಯಕ್ತಿ ಗುರು. ಇಂತಹ ಮಹತ್ವಪೂರ್ಣ ಜವಾಬ್ದಾರಿ ಹೊತ್ತಿರುವ ಎಲ್ಲಾ ಗುರುಗಳು ತಮ್ಮ ಪಾಲಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿ ,ಸಮಾಜ ತಮಗೆ ನೀಡಿರುವ ಮಹತ್ವಪೂರ್ಣ ಸ್ಥಾನಕ್ಕೆ ಗೌರವ ಸಲ್ಲುವ ನಿಟ್ಟಿನಲ್ಲಿ ಸಾಗಬೇಕು.

ಶಿಸ್ತುಗಾರನಾಗಿ ವಿದ್ಯಾರ್ಥಿಗಳ ಜ್ಞಾನಧಾಹಕ್ಕೆ ತಕ್ಕಂತೆ.. ಕ್ಷಣ ಕ್ಷಣ ಉಲ್ಲಾಸ ಬರಿತನಾಗಿ..ಕಠಿಣವಾದುದನ್ನು ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಬಿಡದೇ ಪಠಿಸುವವನೇ ಗುರುವಾಗಿದ್ದಾನೆ*ನಾನು ಒಬ್ಬ ಗುರು* ಗುರುಗಳು ದೇಶದ ಅತ್ಯುತ್ತಮ ಮೆದುಳುಗಳು  ಇದ್ದಂತೆ .ನೀವು ಹುಟ್ಟು ಹಬ್ಬ ಆಚರಿಸುವುದೇ ಆದರೆ ..ನನ್ನ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿ ಎಂದು ಹೇಳುವ ಮೂಲಕ ..ಗುರುವಿಗೆ ಅವರ ಶಿಷ್ಯಕೋಟಿ ಹಾಗೂ ಸಮಾಜ ಅಪಾರ ಗೌರವ ಸಲ್ಲಿಸುವ ಅವಕಾಶ ಒದಗಿಸಿದರು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್.

ಗುರುವಾದವನು ತನ್ನ ವಿವೇಕ, ದೂರದೃಷ್ಟಿ, ಮಾನವೀಯತೆ, ಮಾರ್ಗದರ್ಶನ, ತಾಳ್ಮೆ, ನಡತೆ, ಮುಂತಾದವುಗಳ ಮೂಲಕ ಭವ್ಯ ಭಾರತದ ಸತ್ಪ್ರಜೆಗಳನ್ನು ರೂಪಿಸುವನು.ಇಂತಹ ಗುರುವಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಮಹತ್ವಪೂರ್ಣವಾಗಿದೆ.

ಅಂತಹ ಪರಮ ಪವಿತ್ರ ಜವಾಬ್ದಾರಿ ಹೊತ್ತ ಗುರುವಿನ ಕುರಿತು ಕೆಲವೊಂದು ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ.ಮಗುವೆಂಬ ಹೊಲಕ್ಕೆ ಶಾಲೆಯೆಂಬ ಬೇಲಿಹಾಕಿ * * ಬೋದನೆಯೆಂಬ ನೀಗಿಲುತ್ತುಅಕ್ಷರವೆಂಬ ಬೀಜ ಭಿತ್ತಿಸುಜ್ಞಾನವೆಂಬ ಶಿಕ್ಷೆಯಿಂದ ಹದ ಮಾಡಿಅಜ್ಞಾನವೆಂಬ ಕಳೆಯ ಕಿತ್ತುಬಡವ ಬಲ್ಲಿದ ಮೇಲು ಕೀಳೆಂಬ ರೋಗಗಳಿಗೆ ಸಮಾನತೆಯ ಬೆಳೆ ಬೆಳೆದುನವ ಸಮಾಜ ಸೃಷ್ಟಿಸುವ ಕೃಷಿಕನೇ ಗುರುವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಚೇತನವನ್ನು ಬಡಿದೆಬ್ಬಿಸಿ ಸಮಾಜದ ಆದರ್ಶ ವ್ಯಕ್ತಿಗಳಾಗಿ ರೂಪಿಸುವ ರುವಾರಿಗಳೇ  ಶಿಕ್ಷಕರು.ಬೋಧನೆ ಎಂಬುದು ಪರಮ ಪವಿತ್ರ ಕಾರ್ಯವಾಗಿದ್ದು, ಆ ಭಾಗ್ಯ ಎಲ್ಲರಿಗೂ ಲಭಿಸದು. ಆದುದರಿಂದ ಗುರುವಾದವರು ತಮ್ಮ ಜೀವನದಲ್ಲಿ ಬರುವ ಸಾವಿರಾರು ಮಕ್ಕಳ ಸುಂದರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡತ್ತಾರೆವಿದ್ಯಾರ್ಥಿಗಳು ದಿನದ ಹೆಚ್ಚಿನ ಸಮಯವನ್ನು ಶಾಲೆಗಳಲ್ಲಿ ಶಿಕ್ಷಕರೊಂದಿಗೆ ಕಳೆಯುತ್ತಾರೆ. ಆದ್ದರಿಂದ ಶಿಕ್ಷಕ ಕಲಿಸುವಲ್ಲಿ ಶ್ರದ್ಧ, ಆಸಕ್ತಿ ,ಪ್ರೀತಿ, ಮುಂತಾದ ಆದರ್ಶ ಗುಣಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ ಆದರ್ಶ ಪ್ರಾಯರಾಗುತ್ತಾರೆ.ವಿದ್ಯಾರ್ಥಿಗಳಲ್ಲಿ ಅನುಕರಣ ಸ್ವಭಾವ ಹೆಚ್ಚಾಗಿದ್ದೂ ಬಹುತೇಕ ಸಂದರ್ಭಗಳಲ್ಲಿ ಅವರು ತಮ್ಮ ಶಿಕ್ಷಕರನ್ನೇ ಅನುಕರಿಸುತ್ತಾರೆ. ಕಾರಣ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಅಂತಹ ಅವಿನಾಭಾವ ಸಂಬಂಧವಿರುತ್ತದೆಮಗು ಗುರು ಹೇಳಿದ ಪ್ರತಿ ವಿಷಯವನ್ನು ನಂಬುತ್ತದೆ.ಮಗುವಿನ ಜಗತ್ತಿನಲ್ಲಿ ಗುರುವೆ ರಿಯಲ್ ಹೀರೋ. ರೋಲ್ ಮಾಡಲ್ ಸೂಪರ್ ಮ್ಯಾನ್.. ಆಗಿರುತ್ತಾನೆ.ಯಥಾ ರಾಜ  ತಥಾ ಪ್ರಜಾ   ಎಂಬಂತೆ ಗುರುವಿದ್ದಂತೆ ಗುರುಗಳಿರುತ್ತಾರೆ.ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಹೆಮ್ಮೆಯ ಪ್ರಜೆಗಳು  ಹಾಗಾಗಿ  ಬಾವಿ ಭವಿಷ್ಯತ್ತಿನ ಸತ್ಪ್ರಜೆಗಳನ್ನು ನಿರ್ಮಿಸುವ ಗುರುವು ಮೊದಲು ಮಕ್ಕಳಿಗೆ ಮಾದರಿಯಾಗಬೇಕು. ಗುರು ತನ್ನ ಶಿಷ್ಯರ ಮನಸ್ಸಿನ ಮೇಲೆ ಭಿತ್ತಿದ ಚಿತ್ರವನ್ನು ಯಾರು ಎಂದೂ ಅಳಿಸಲಾರರು  ಹಾಗಾಗಿ ಗುರುವಾದವರೂ ಪ್ರತಿ ಹೆಜ್ಜೆಯನ್ನು ಜಾಗರೂಕತೆಯಿಂದ ಇಡಬೇಕು.ಶಿಕ್ಷಕ ಎಂದರೆ ಶಿಸ್ತಿನ ಸಿಪಾಯಿಯಾಗಿಕ್ಷಮಾಗುಣ ಸಂಪನ್ನನಾಗಿಕರ್ಮವನ್ನು ಎಸಗುವವನೇ ಆಗಿದ್ದಾನೆಗುರುವಾದವನು ಸತ್ಕಾರ್ಯವೆಂಬ ಮಾರ್ಗದಲ್ಲಿ ನಡೆಯುವ ದಾರಿ ತೋರಬೇಕು. ಶಿಕ್ಷಕ ಎಂಬ ಪದ ಕಿವಿಗೆ ಬಿದ್ದ ತಕ್ಷಣ ಒಂದು ರೀತಿಯ ಅಭಿಮಾನ ಪ್ರೀತಿ ಮೆಚ್ಚುಗೆ ಮತ್ತು ಪುಳಕಿತ ಭಾವನೆ ಮೂಡುತ್ತದೆ.ಕಾರಣ ಅವರು ಮಕ್ಕಳ ಬದುಕಿನ ಆಶಾಕಿರಣವಾಗಿರುತ್ತಾರೆ.ಗುರು ಎಂಬ ಪಾತ್ರ ನಿನ್ನೆ ಇಂದಿನದಲ್ಲಾ. ಪುರಾತನ ಕಾಲದಿಂದಲೂ ನಡೆದು ಬಂದಿದೆ. ಆಗ ಗುರುಕುಲಗಳು ಶಿಕ್ಷಣ ನೀಡುವ ಮೂಲಕ ತನ್ನ ಶಿಷ್ಯರ ಜ್ಞಾನದ ಕಣಜವನ್ನು ತುಂಬುತಿದ್ದರು.ನದಿ ಹೊಳೆಗಳ ತಟದಲ್ಲಿಜುಳು ಜುಳು ನಿನಾದಲಿಹಕ್ಕಿಗಳ ಕಲರವದಲ್ಲಿದುಂಬಿಗಳ ಝೇಂಕಾರದಲಿ ಪ್ರಕೃತಿಯ ಸುಂದರ ಮಡಿಲಿನಲ್ಲಿ ನಡೆಯುತ್ತಿತ್ತು ಜೀವನ ಪಾಠ ಗುರುಕುಲದಲ್ಲಿ ಬೆಳದಿಂಗಳ ಊಟ ಎಂತಹ ಮೋಜು. ಶಿಷ್ಯರೆಲ್ಲ ಗುರುವಿದ್ದೆಡೆ ಬರುತ್ತಿದ್ದರು. ವಿದ್ಯೆಯ ಅರಸಿ ಮನೆಯ ತ್ಯಜಿಸಿ ಗೋವುಗಳ ಲಾಲನೆ ಪಾಲನೆ ಮಾಡುತಲಿ,ಗುರುಗಳ ಸೇವೆಯಗೈಯುತ, ಸಕಲಗುಣ ಸಂಪನ್ನರಾಗಿ, ವಿದ್ಯೆಯ ಕಲಿಯುತ್ತಿದ್ದರು .ಭಿಕ್ಷೆ ಬೇಡಿ ಅನ್ನವ ತಿಂದು,ಯೋಗ ಧ್ಯಾನದ ಸಿದ್ಧಿ ಪಡೆದು, ಬದುಕು ನಡೆಸುವ ಬುದ್ಧಿ ಪಡೆದು, ಸಂಸ್ಕೃತಿ ಸಂಸ್ಕಾರದಲ್ಲಿ ಮಿಂದೆದ್ದು,ಅಂದಕಾರದ ತಮವನು ಕಳೆದ ನಮ್ಮಯ ಹೆಮ್ಮೆಯ ಗುರುಕುಲಗಳು. ಗುರುಕುಲ ಸ್ನೇಹದ ಸಾಗರ ಪ್ರೀತಿಯ ಆಗರ ಬಾಂಧವ್ಯದ ಬೆಸುಗೆ ಜ್ಞಾನದ ಮೇರುಪರ್ವತ ಕೃಷ್ಣಸುಧಾಮರ ಮಧುರಸ್ನೇಹದ ಆಗರವಾಗಿತ್ತು.ನಾವು ಗುರು ಶಿಷ್ಯರ ಬಾಂಧವ್ಯವನ್ನು ನೋಡುವುದಾದರೆ ಪುರಾಣದಲ್ಲಿ ಪರಶುರಾಮರ ಶಿಷ್ಯರಾದ ಭೀಷ್ಮ ಹಾಗೂ ಕರ್ಣನ ಸಾಮರ್ಥ್ಯ ಹಾಗೂ ಗುರುವಿಗೆ ತನ್ನ ಶಿಷ್ಯರ ಬಗ್ಗೆ ಇದ್ದ ನಂಬಿಕೆಗಳುಜಗತ್ತಿಗೆ ಸಾಕ್ಷಿಯಾಗಿ ನಿಂತಿವೆ. ಭೀಷ್ಮನು ತನಗೆ ಅನ್ಯಾಯ ಮಾಡಿದ ಎಂದು ಅಂಬಾ ಭೀಷ್ಮನ ಗುರುವಾದ ಪರಶುರಾಮರ ಬಳಿ ಹೋಗಿ ಕೇಳಿದಾಗ ಅವರು ನನ್ನ ಬಳಿ ವಿದ್ಯೆ ಕಲಿತ ಶಿಷ್ಯ ನಿನಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಗುರುವಿಗೆ ತನ್ನ ಶಿಷ್ಯನ ಮೇಲೆ ಇದ್ದ ನಂಬಿಕೆ ಹಾಗೂ ತನ್ನ ಕಲಿಸುವಿಕೆಯ ಮೇಲೆ ಇದ್ದ ವಿಶ್ವಾಸದ ಪ್ರತೀಕವಾಗಿತ್ತು. ಅದು ನಿಜವಾದ ಗುರು ಶಿಷ್ಯರ ಭಾವಗಳ ಬಂಧ.ಅದೇ ರೀತಿ ದ್ರೋಣಾಚಾರ್ಯರು ಕೇಳಿದ ಗುರುಕಾಣಿಕೆಗೆ ಅರ್ಜುನ ಪಾಂಚಾಲವನ್ನು ಗೆದ್ದುಕೊಟ್ಕರೆ ಏಕಲವ್ಯ ತನ್ನ ಗುರು ಕೇಳಿದ ಹೆಬ್ಬೆರಳನ್ನೆ ಕತ್ತರಿಸಿ ಕೊಟ್ಟನು. ಇಂತಹ ಅನನ್ಯ ಸಂಬಂಧ ಗುರು ಶಿಷ್ಯರ ನಡುವೆ ಇತ್ತು.ಇಂತಹ ಅವಿನಾಭಾವ ಸಂಬಂಧ ಗುರು ಶಿಷ್ಯರ ನಡುವಿನ ಬಾಂಧವ್ಯದ ಪ್ರತೀಕವಾಗಿದೆ. ಇಂತಹ ಸಕಲ ಗುರು ವೃಂದದವರಿಗೂ ಶಿಕ್ಷಕ ದಿನಾಚರಣೆ ಶುಭಾಶಯಗಳು.  ಅನುಸೂಯ ಯತೀಶ್.ಶಿಕ್ಷಕಿ ಬೆಂಗಳೂರು