Delivery between 2-8 Days
No returns accepted. Please refer our full policy
Your payments are 100% secure
nil
Rudramurthy Sastry S |
|
ಕನ್ನಡದ ಹೆಸರಾಂತ ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿಯವರು ಜನಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯಲ್ಲಿ, ಜನ್ಮದಿನಾಂಕ; 11, ನವೆಂಬರ್ 1948, ತಂದೆ ಎಸ್.ಎಸ್. ಶಿವರುದ್ರಯ್ಯ, ತಾಯಿ ಸಿದ್ಧಗಂಗಮ್ಮ, ಸ್ವಗ್ರಾಮದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮತ್ತು ರಾಮನಗರದಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದರು. ನಂತರ, ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿಯನ್ನು ಗಳಿಸಿದರು. ಕಾದಂಬರಿಕಾರರಾಗಿ ಗೀತಕಾರರಾಗಿ ಹೆಸರುವಾಸಿಯಾಗಿರುವ ಶಾಸ್ತ್ರಿಗಳು 100ಕ್ಕೂ ಹೆಚ್ಚಿನ ಚಲನಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಾರೆ. 10 ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆಗಳನ್ನು ಬರೆದಿದ್ದಾರೆ. ಚಾರಿತ್ರಿಕ ಕಥಾವಸ್ತುವನ್ನು ಹೊಂದಿರುವ ಗಂಡುಗಲಿ ಕುಮಾರರಾಮ ಚಲನಚಿತ್ರಕ್ಕೆ ಅವರದೆ ಕಥೆ, ಸಂಭಾಷಣೆ, ಹಲವಾರು ಟೀವಿ ಧಾರಾವಾಹಿಗಳಿಗೆ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಸಹ ಅವರು ರಚಿಸಿಕೊಟ್ಟಿದ್ದಾರೆ. ಸು. ರುದ್ರಮೂರ್ತಿ ಶಾಸ್ತ್ರಿಗಳು 160ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದು ಅವುಗಳಲ್ಲಿ 16 ಕವನ ಸಂಕಲನಗಳು, 30ಕ್ಕೂ ಹೆಚ್ಚಿನ ಚಾರಿತ್ರಿಕ ಹಾಗೂ ಸಾಮಾಜಿಕ ಕಥಾ ವಸ್ತುಗಳನ್ನುಳ್ಳ ಕಾದಂಬರಿಗಳು, ಮಕ್ಕಳ ಪುಸ್ತಕಗಳು ಹಾಗೂ ಅನುವಾದಗಳು ಸೇರಿವೆ. ಅವರ ಲೇಖನಿಯಿಂದ ಮೂಡಿಬಂದಿರುವ ಕೃತಿಗಳಲ್ಲಿ ಕೆಲವೆಂದರೆ, ಕಾವ್ಯ: ಪರಿಧಿ, ಚಿತ್ರಕಲ್ಪನೆ, ಅಲ್ಪಜ್ಞನ ವಚನಗಳು; ಕಾದಂಬರಿಗಳು: ಔರಂಗಜೇಬ, ಬಣ್ಣದ ಹಕ್ಕಿ, ಚಾಣಕ್ಯ, ಮಣ್ಣಿನ ಋಣ, ಸರ್ವಜ್ಞ, ಸ್ವಪ್ನಗಾನ, ಧರ್ಮಚಕ್ರವರ್ತಿ ಅಶೋಕ, ಕುಮಾರ ರಾಮ, ಭೀಷ್ಮ, ಊರ್ಮಿಳೆ; ಇತರ ಪುಸ್ತಕಗಳು: ಬಸವ ವಚನ ಸಂಗ್ರಹ, ಸರ್ವಜ್ಞ ವಚನ ಸಂಗ್ರಹ, ಅರೇಬಿಯನ್ ನೈಟ್ಸ್ ಕಥೆಗಳು, ಕನಕದಾಸರ ಪದಗಳು, |
0 average based on 0 reviews.