Delivery between 2-8 Days
No returns accepted. Please refer our full policy
Your payments are 100% secure
ಸದ್ದಿಲ್ಲದೆ ಬರೆಯುತ್ತಲೇ ಕೊಡಗಿನ ಗಡಿ ದಾಟಿ ಹೆಸರು ಮಾಡಿದ ಕೊಡಗಿನ ಹೈದ ಹೇಮಂತ್ ಪಾರೇರ. ಸಹಜ ಪ್ರತಿಭೆ, ಸ್ವಪ್ರಯತ್ನ ಮತ್ತು ನಿರಂತರ ಅಭ್ಯಾಸದಿಂದ ಅಕ್ಷರ ಲೋಕದೊಳಗೆ ತನ್ನದೇ ಛಾಪು ಮೂಡಿಸಿದವರು. ತನ್ನ ದಿನನಿತ್ಯದ ಬದುಕಿನ ವ್ಯವಹಾರದ ನಡುವೆಯೂ ಕತೆ ಕವಿತೆಯ ಗುಂಗಿನೊಳಗೆ ನಡೆಯುತ್ತಾ ಹೊಸತೊಂದು ಲೋಕವನ್ನು ತೆರೆದು ತೋರಿಸಬಲ್ಲರು ಅನ್ನುವುದನ್ನು ಅವರ ಒಂದಷ್ಟು ಕಥೆಗಳನ್ನು ಓದಿದಾಗ ಮನದಟ್ಟಾಗುತ್ತದೆ. ಚೆಂದದ ಭಾಷೆಯ ಮೂಲಕ ಕತೆ ಹೇಳುವ ಕಲೆ ಹೇಮಂತ್ ಗೆ ಸಹಜವಾಗಿ ಸಿದ್ಧಿಸಿದೆ. ಭಾವಪೂರ್ಣವಾಗಿ ಒಳಗೊಳ್ಳುತ್ತಾ, ರಸವತ್ತಾಗಿ ವರ್ಣಿಸುತ್ತಾ ಒಂದು ಕಾಲ್ಪನಿಕ ಪ್ರಪಂಚವನ್ನು, ವಾಸ್ತವ ಕಂಡುಂಡ ಸಂಗತಿಯೆಂಬಂತೆ ನಿರೂಪಿಸಬಲ್ಲ ತಾಕತ್ತು ಅವರ ಬರಹಕ್ಕಿದೆ. ಶುರುವಾತಿನಲ್ಲಿ ಬರೆಯುವ ಎಲ್ಲರ ದಾಟಿಯಂತೆ ಒಲವು ಇವರ ಬರಹಗಳ ಮೂಲದ್ರವ್ಯ. ಒಂದು ಕತೆಯ ಪಾತ್ರದ ಮೂಲಕ ಒಂದು ಪರಿಸರದ ಚಿತ್ರಣವನ್ನು, ಯಥಾವತ್ತಾಗಿ ಅನಾವರಣಗೊಳಿಸಬಲ್ಲ ಕುಶಲಗಾರಿಕೆಯೂ ಹಾಗೂ ಎಲ್ಲೋ ಕಂಡು ಕೇಳಿದ ಭಾವದೆಳೆಯೊಂದನ್ನ ನೂಲುತ್ತಾ ಕತೆಯಾಗಿಸುವ ಜಾಣ್ಮೆಯೂ ಅವರಿಗೆ ಸಿದ್ಧಿಸಿದೆ. ಕಾಡುವ ಸಂಗತಿಗಳಿಗೆ ಮಿಡುಕುವ ಅವರ ಹೃದಯ ಮತ್ತಷ್ಟು ಕಥೆಗಳನ್ನು ಹೆಣೆಯಲಿ. ಕತೆ, ಕವಿತೆಯನ್ನು ಉಸಿರೆಂಬಂತೆ ಅಪ್ಪಿಕೊಂಡು ಬದುಕುತ್ತಿರುವ ಈ ಸೂಕ್ಷ್ಮ ಸಂವೇದನಾಶೀಲ ಬರಹಗಾರರನ್ನು ಅಕ್ಷರಲೋಕ ಕೈ ಹಿಡಿದು ಮುಂದೆ ತರಲಿ. ಶುಭಾಶಯಗಳು.
- ಸ್ಮಿತಾ ಅಮೃತರಾಜ್
ಹೇಮಂತ್ ಪಾರೇರಾ |
|
0 average based on 0 reviews.